ಫೀಸ್ ಕಟ್ಟುವವರೆಗೂ ಹಾಲ್ ಟಿಕೆಟ್ ಕೊಡಲ್ಲ

ಬೆಂಗಳೂರು: ರಾಜ್ಯದಲ್ಲಿ ಜುಲೈ 19 ಹಾಗೂ 22 ರಂದು SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಕೇವಲ 4 ದಿನಗಳು ಬಾಕಿ ಇರುವಾಗಲೇ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಲ್ ಟಿಕೆಟ್ ಕೊಡದೇ ಸತಾಯಿಸುತ್ತಿವೆ. ಈ ಕುರಿತು ಆರ್​ಟಿಇ ಪೇರೆಂಟ್ಸ್ ಟೀಚರ್ಸ್ ಅಸೋಸಿಯೇಷನ್​​ಗೆ ನಾನಾ ಜಿಲ್ಲೆಗಳ ಪೋಷಕರಿಂದ ದೂರುಗಳು ಬರ್ತಿವೆ.

ಆಳ್ವಾಸ್​​ನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬರು ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಬೇಕಿದ್ದು, ಪೋಷಕರು ಹಾಲ್ ಟಿಕೆಟ್ ಕೇಳಿದ್ದರೆ ಶಾಲೆ ನೀಡುತ್ತಿಲ್ವಂತೆ. 9ನೇ ತರಗತಿಯ ಶಾಲಾ ಶುಲ್ಕ ಪಾವತಿಯು ಬಾಕಿ ಇದ್ದು ಅದನ್ನ ಪಾವತಿ ಮಾಡೋ ತನಕ ಹಾಲ್ ಟಿಕೆಟ್ ನೀಡಲ್ಲ ಅಂತಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಶಾಲೆಯವರು ಆಡ್ಮಿಶನ್ ಆಗಿಲ್ಲ, ದುಡ್ಡು ಕಟ್ಟಿಲ್ಲ ಏನ್ ಮಾಡಿಕೊಳ್ತಿರೋ ಮಾಡಿಕೊಳ್ಳಿ ಅಂತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.‌

NEWS DESK

TIMES OF BENGALURU