ಬೆಂಗಳೂರು: ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷೆ ಕಡ್ಡಾಯ ಬೇಡವೆಂದು ಕೆಲ ಪೋಷಕರ ವರ್ಗ ಸಹಿ ಸಂಗ್ರಹ ಮಾಡುತ್ತಿದೆ. ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಕಾದಾಟ ಶುರುವಾಗಿದೆ. ಯಲಹಂಕದ ಪ್ರೆಸಿಡೆನ್ಸಿ ಶಾಲೆಯ ಪೋಷಕರ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಕನ್ನಡ ಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯ ಮಾಡಬಾರದೆಂದು ಚೇಂಜ್ ಆರ್ಗ್ ವೆಬ್ಸೈಟ್ನಲ್ಲಿ ಅರ್ಜಿಗೆ ಕನ್ನಡೇತರರಾದ ವಲಸಿಗ ಪೋಷಕರು ಸಹಿ ಅಭಿಯಾನ ಆರಂಭಿಸಿದ್ದಾರೆ. ಈವರೆಗೆ ಸುಮಾರು 2500 ಸಹಿ ಸಂಗ್ರಹವಾಗಿದೆ. ಹೀಗಾಗಿ ಕನ್ನಡ ವಿರೋಧಿ ವಲಸಿಗರು ನಮಗೆ ಬೇಕೇ?ಎಂದು ಹ್ಯಾಶ್ಟ್ಯಾಗ್ ಮಾಡಿ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಇದೀಗ ಪ್ರಕಟಣೆ ಹೊರಡಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕನ್ನಡ ನೆಲದಲ್ಲಿರುವ ಯಾವುದೇ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಸಂಬಂಧದ ಕನ್ನಡ ಕಲಿಕಾ ಅಧಿನಿಯಮ-2015ರ ಕಾಯ್ದೆ ಅನುಷ್ಠಾನದಲ್ಲಿ ಯಾವುದೇ ರಾಜಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
NEWS DESK
TIMES OF BENGALURU