ಅಕ್ರಮ ಪಿಸ್ತೂಲ್ ಮಾರಾಟ: ಮೂವರ ಬಂಧನ

ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ 20 ದಿನಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಲ್ಲಿ ಹೊರಬಂದು ಮತ್ತೆ ಹಳೆ ಕಾಯಕ ಮುಂದುವರೆಸಿದ್ದ. ಯಾರಿಗೂ ಗೊತ್ತಾಗದಂತೆ ಮನೆಯಲ್ಲಿ‌‌ ಪಿಸ್ತೂಲ್ ಖರೀದಿ ವ್ಯವಹಾರದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಸೇರಿದಂತೆ ಮೂವರು ಆರೋಪಿಗಳನ್ನು ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಡಿ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಸಂಪಿಗೆಹಳ್ಳಿ ರೌಡಿಶೀಟರ್ ಫಯಾಜ್ ವುಲ್ಲಾ, ಶಿವಾಜಿನಗರ ಠಾಣೆ ರೌಡಿಶೀಟರ್ ಮೊಹಮ್ಮದ್ ಅಲಿ ಹಾಗೂ ಸೈಯ್ಯದ್ ಸಿರಾಜ್ ಅಹಮದ್ ಎಂಬುವರನ್ನು ಬಂಧಿಸಿ 3 ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ 24 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

NEWS DESK

TIMES OF BENGALURU