ಆಲ್ ದ ಬೆಸ್ಟ್, ಧೈರ್ಯವಾಗಿ ಪರೀಕ್ಷೆ ಬರೆಯಿರಿ

ಬೆಂಗಳೂರು: ಹಲವು ಕುಂದು-ಕೊರತೆಗಳ ಮಧ್ಯೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಸಂಪೂರ್ಣ ಶುಲ್ಕ ಕೊಡದೇ ಕೇವಲ ಶೇಕಡಾ 70ರಷ್ಟನ್ನು ಮಾತ್ರ ಭರಿಸಿರುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡದೇ ಹಲವು ಖಾಸಗಿ ಶಾಲೆಗಳು ಸತಾಯಿಸಿತ್ತಿವೆ. ಈ ಮಧ್ಯೆ ಆಲ್ ದ ಬೆಸ್ಟ್ ಆಲ್ ದ ಬೆಸ್ಟ್, ಬನ್ನಿ ಮಕ್ಕಳೇ, ನಿಮಗಾಗಿ ಎಲ್ಲ ಸಿದ್ಧತೆಯಾಗಿದೆ. ಧೈರ್ಯವಾಗಿ ಪರೀಕ್ಷೆ ಬರೆಯಿರಿ. ಆಲ್ ದ ಬೆಸ್ಟ್ ಎಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಚಲನಚಿತ್ರ ನಟನಟಿಯರು ಹಾರೈಸಿದ್ದಾರೆ. ಇನ್ನು ಶಿಕ್ಷಣ ಇಲಾಖೆ ಈ ಬಗ್ಗೆ ಕಿರುಚಿತ್ರವನ್ನೇ ಮಾಡಿ ಬಿಡುಗಡೆ ಮಾಡಿದೆ.

ಇದೇ ಜುಲೈ 19 ಹಾಗೂ 22ರಂದು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆಯೋಜಿಸಲಾಗಿದೆ. ಇನ್ನೂ ವಿದ್ಯಾರ್ಥಿ ಜೀವನದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಮುಖ ಹಂತ. ಇದು ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಪ್ರಮುಖ ಘಟ್ಟವಾದ್ದರಿಂದ ಈ ಪರೀಕ್ಷೆಯನ್ನು ಎದುರಿಸುವುದು ನಿಜಕ್ಕೂ ಒಂದು ಉತ್ತಮ ಸಂದರ್ಭವಾಗಿದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಬೇಕು ಎಂದು ವಿನಂತಿಸಿದ್ದಾರೆ. ಅನು ಪ್ರಭಾಕರ್ ಅವರೊಂದಿಗೆ ಮತ್ತಷ್ಟು ನಟ-ನಟಿಯರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.

NEWS DESK

TIMES OF BENGALURU