ಬೆಂಗಳೂರು: ಅಪರಾಧಗಳ ರಾಜಧಾನಿಯಾಗಿ ಮಾರ್ಪಾಡು ಆಗುತ್ತಿದೆಯಾ ಅನ್ನುವಷ್ಟು ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ದೃಢ ಸಂಕಲ್ಪ ತೊಟ್ಟಿರುವ ಬೆಂಗಳೂರು ಪೊಲೀಸರು ಕಳೆದ ವಾರ ಸಾವಿರಾರು ರೌಡಿಗಳನ್ನು ಕರೆದು, ಕಟ್ಟೆಚ್ಚರ ನೀಡಿ ಕಳಿಸಿದ್ದಾರೆ. ಅದಾದ ಮೇಲೆ ಪಿಂಚಣಿದಾರರ ಸ್ವರ್ಗವೆಂಬ ಹೆಗ್ಗಳಿಕೆಯ ಬೆಂಗಳೂರಿಗೆ ಪಾತಕ ವಿದೇಶಿಗರು ಪೀಡೆಯಾಗಿ ಪರಿವರ್ತನೆಗೊಂಡಿದ್ದಾರೆ.
ಹಾಗಾಗಿ ಇಂದು ಸಿಸಿಬಿ ಪೊಲೀಸರು ಫೀಲ್ಡಿಗೆ ಇಳಿದು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿಗರನ್ನು ವಿಚಾರಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ವಿದೇಶಿಯರ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಅನಧಿಕೃತವಾಗಿ, ವೀಸಾ ಅವಧಿ ಮೀರಿದ್ದರೂ ತಮ್ಮ ದೇಶಗಳಿಗೆ ಹಿಂತಿರುಗದೆ ಭಾರತದಲ್ಲೇ ವಾಸವಿರುವ ಹಿನ್ನೆಲೆಯಲ್ಲಿ ಅಂತಹ ವಿದೇಶಿ ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ.
NEWS DESK
TIMES OF BENGALURU