ಬೆಂಗಳೂರು: ಪ್ರೀತಿ ಮಾಯೆ ಹುಷಾರು ಎಂಬ ಮಾತುಗಳನ್ನು ನಾವು ಹೇಳಿರುತ್ತೀವಿ. ಪ್ರೀತಿಯಲ್ಲಿ ಹುಚ್ಚರಾಗಿರುವವರನ್ನೂ ನಾವು ನೋಡಿದ್ದೀವಿ. ಅದೇ ಪ್ರೀತಿಯಲ್ಲಿ ಬಿದ್ದು ಇಲ್ಲೊಬ್ಬ ಭಗ್ನ ಪಾಗಲ್ ಪ್ರೇಮಿ ತಡರಾತ್ರಿ ಕಾರುಗಳ ಗಾಜನ್ನು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿ ಬೆಂಗಳೂರು ತಡ ರಾತ್ರಿ ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ನಿವಾಸಿ ಸತೀಶ್ ಎಂಬಾತ ಕುಡಿದ ಮತ್ತಿನಲ್ಲಿ ಕಂಡ ಕಂಡ ಕಾರ್ಗಳ ಗಾಜು ಹೊಡೆದು ಪುಂಡಾಟ ಮೆರೆದಿದ್ದಾನೆ. ಕುಡಿದ ಮತ್ತಿನಲ್ಲಿ ಮಹಾಲಕ್ಷ್ಮೀ ಲೇಔಟ್ನಲ್ಲಿ ಮತ್ತು ಬಸವೇಶ್ವರನಗರದಲ್ಲಿ 5 ಕಾರುಗಳನ್ನು ಜಖಂಗೊಳಿಸಿದ್ದಾನೆ. ಕುಡಿದ ಮತ್ತಿನಲ್ಲಿ ಬೈಕ್ನಲ್ಲಿ ಬಂದು ಕೃತ್ಯ ಎಸಗಿದ್ದಾನೆ. ಮನೆಗಳ ಮುಂದೆ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳ ಗಾಜನ್ನು ದೊಣ್ಣೆಯಿಂದ ಹೊಡೆದು ಭೀಕರವಾಗಿ ವರ್ತಿಸಿದ್ದಾನೆ. ಬಸವೇಶ್ವರನಗರ ಪೆÇಲೀಸರಿಂದ ಆರೋಪಿ ಸತೀಶ್ನನ್ನು ಬಂಧಿಸಲಾಗಿದೆ.
NEWS DESK
TIMES OF BENGALURU