ಚಿನ್ನಾಭರಣ ಕಳವು : ಪ್ರಕರಣ ದಾಖಲು

ಚಿನ್ನಾಭರಣ ಕಳವು : ಪ್ರಕರಣ ದಾಖಲು

ನೆಲಮಂಗಲ: ವ್ಯಕ್ತಿಯೊಬ್ಬ ವೈನ್ ಶಾಪ್ ಬಳಿ ಸ್ಕೂಟರ್ ನಿಲ್ಲಿಸಿ ಮದ್ಯ ಖರೀದಿಗಾಗಿ ಒಳಗೆ ಹೋಗಿದ್ದ ಸಮಯ ನೋಡಿ ದುಷ್ಕರ್ಮಿಗಳು ಸ್ಕೂಟರ್‌ನಲ್ಲಿದ್ದ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಯಲ್ಲಿ ಮಹೇಶ್ ಎಂಬುವವರು ಬ್ಯಾಂಕ್ ನಲ್ಲಿದ್ದ ಚಿನ್ನಾಭರಣವನ್ನು ಬಿಡಿಸಿಕೊಂಡು ಬಂದು ಗಾಡಿ ನಿಲ್ಲಿಸಿ ಮದ್ಯದ ಅಂಗಡಿಗೆ ಹೋಗಿದ್ದನ್ನು ನೋಡಿ ೭ ಲಕ್ಷ ರು ಮೌಲ್ಯದ ಚಿನ್ನಾಭರಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಪರಾರಿಯಾಗಿದ್ದಾರೆ. ಸದ್ಯ ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಬೆನ್ನತ್ತಿದ್ದಾರೆ.

 

times of bengaluru

news desk